ಬಜೆ ಎಲ್ಲಿ ಬೆಳೆಯುತ್ತದೆ
ಅಕೊರಸ್ ಕೆಲಾಮಸ್ (Acorus calamus L) ಎಂದು ಕರೆಯಲ್ಪಟ್ಟ ಬಜೆ ‘ಏರೇಸಿ’ ಕುಟುಂಬಕ್ಕೆ ಸೇರಿದ ಸಸ್ಯಮೂಲಿಕೆ. ಇದು ಸಾಮಾನ್ಯವಾಗಿ ಜೌಗು ಪ್ರದೇಶದಲ್ಲಿ ಬೆಳೆಯುತ್ತದೆ. ನೀರಿನಂಶ ಜಾಸ್ತಿ ಇರುವ ಕಡೆ ಬೆಳೆಯುತ್ತದೆ. ಬಜೆ ಸಸ್ಯ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ . ಅಧಿಕ ನೀರನ್ನು ಹೀರಿಕೊಳ್ಳುವ ಈ ಸಸ್ಯ ಭದ್ರವಾಗಿ ಬೇರೂರುತ್ತದೆ. ಮನೆ ಮದ್ದಾಗಿ ಬಳಸುವ ಈ ಗಿಡ ಬಜೆ ಬೇರು ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಔಷಧವಾಗಿ ಇದನ್ನು ಬಳಸುತ್ತಾರೆ. ರುಚಿಯಲ್ಲಿ ಸ್ವಲ್ಪ ಖಾರ.
ಬಜೆ ಉಪಯೋಗ
ಇದು ದೇಹಕ್ಕೆ ತುಂಬಾ ತಂಪು. ಇದು ನೀರಿನಾಸರೆ ಇರುವ ಕಡೆ ಬೆಳೆಯುವ ಸಸಿ. ಬೇರುಗಳಿಗೆ ಸುವಾಸನೆಯಿರುವುದು. ರುಚಿ ಖಾರವಾಗಿರುವಿದು. ಹೊಗಳು ಸಣ್ಣ ಸಣ್ಣದಾಗಿದ್ದು ತಿಳಿ ಹಸಿರಾಗಿರುವುವು. ಗ್ರಾಮವಾಸಿಗಳಿಗೆ, ಅಜ್ಜಿಯಂದಿಯರಿಗೆ ಚಿರಪರಿಚಿತ ಮೂಲಿಕೆ.
1. ಬಜೆಯನ್ನು ಸುಟ್ಟು ಭಸ್ಮವನ್ನು ಮಾಡಿ, ಅರ್ಧ ಚಮಚ ಭಸ್ಮಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ದಿವಸಕ್ಕೆ 2 – 3 ವೇಳೆ ತಿನ್ನುವುದರಿಂದ ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.
2. ಬಜೆಯನ್ನು ತೇಯ್ದು ತುಪ್ಪದೊಡನೆ ಕಲಸಿ ಮಕ್ಕಳಿಗೆ ತಿನ್ನಿಸುವುದರಿಂದ ವಾಕ್ ಶಕ್ತಿ, ಬುದ್ಧಿಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
3. ಬಟ್ಟೆಯಲ್ಲಿ ಶೋಧಿಸಿದ ಬಜೆಯ ಚೂರ್ಣ 10ಗ್ರಾಂನಷ್ಟನ್ನು ದಿವಸಕ್ಕೊಮ್ಮೆ ಬೆಳಗ್ಗೆ ಬಿಸಿ ನೀರಿನಲ್ಲಿ ಅಥವಾ ಜೇನಿನಲ್ಲಾಗಲೀ ಇಟ್ಟು 40 ದಿನ ಸೇವಿಸಿದರೆ ಮೂರ್ಛೆ ಗುಣವಾಗುತ್ತದೆ…
4. ಬಜೆಯನ್ನು ಅರೆದು ಲೇಪಿಸುವುದರಿಂದ, ಸಂಧಿವಾತ ಮತ್ತು ಲಕ್ವ ಗುಣವಾಗುತ್ತದೆ.
5. ಹಸಿ ಬಜೆಯ ರಸವನ್ನು ಕಿವಿಗೆ ಹಿಂಡುವುದರಿಂದ ಕಿವಿನೋವು ಕಡಿಮೆಯಾಗುತ್ತದೆ.
6. ಬಜೆ, ನಾಗಕೇಸರಿ, ಹಿಪ್ಪಲಿ ಬೇರಿನ ಚೂರ್ಣಗಳನ್ನು ಸೇರಿಸಿ ಸೇವಿಸಿದರೆ ಸುಖ ಪ್ರಸವವಾಗುತ್ತದೆ.
7. ಬಜೆ ಸೇವಿಸುವುದರಿಂದ ಜಂತುಹುಳುಗಳು ನಾಶವಾಗುತ್ತವೆ.
8. ಬಜೆಯ ಕಷಾಯ ಸೇವನೆಯಿಂದ ಮೂತ್ರಕೋಶದ ಕಲ್ಲು ಕರಗಿ ಹೋಗುತ್ತದೆ. ಮೂತ್ರ ಬಂಧವೂ ನಿವಾರಣೆಯಾಗುತ್ತದೆ.
9. ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಕಾಣಿಸಿಕೊಂಡಲ್ಲಿ ಬಜೆಯನ್ನು ಅರೆದು ತಿನ್ನಿಸುವುದರಿಂದ ಜ್ವರ ವಾಸಿಯಾಗುತ್ತದೆ.
10. ಬಜೆ ಮತ್ತು ಸೈಂಧಲವಣ ಇವೆರಡನ್ನು ನೀರಿನೊಡನೆ ಕುಡಿಯುವುದರಿಂದ ಕಫ ವಾಂತಿಯಾಗಿ ಕೆಮ್ಮು ಶಮನವಾಗುತ್ತದೆ.
11. ಬಜೆಯ ಗಂಧ ತಯಾರಿಸಿ ಸೇವಿಸುವುದರಿಂದ ಅಜೀರ್ಣ, ಹೊಟ್ಟೆನೋವು ಮತ್ತು ಮೂಲವ್ಯಾಧಿ ಗುಣವಾಗುತ್ತದೆ.
12. ಒಂದು ತಿಂಗಳಿಂದ ಆರು ತಿಂಗಳ ಮಕ್ಕಳಲ್ಲಿ ಭೇದಿಯಾಗುತ್ತಿದ್ದಲ್ಲಿ ಹಾಗೂ ಹೊಟ್ಟೆ ಉಬ್ಬರವಿದ್ದಲ್ಲಿ ಬಜೆಪುಡಿಯನ್ನು ಹರಳೆಣ್ಣೆಯಲ್ಲಿ ಬೆರೆಸಿ ಹೊಟ್ಟೆಯ ಮೇಲೆ ಲೇಪಿಸಬೇಕು
ಉತ್ತಮ ಜೀರ್ಣಕ್ರಿಯೆ:
ಬಜೆ ಬೇರನ್ನು ತಿಂಗಳಿಗೆ 2 ಬಾರಿ ತೇಯ್ದು ಒಂದು ಚಮಚ ಸೇವಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಜೊತೆಗೆ, ಹೊಟ್ಟೆ ನೋವು, ಜಂತು ಹುಳು ಈ ರೀತಿಯ ಸಮಸ್ಯೆಗಳ ನಿವಾರಣೆಗೆ ಬಜೆ ಬೇರು ಬಹಳ ಪರಿಣಾಮಕಾರಿ.
ಚಿಕ್ಕ ಮಕ್ಕಳಲ್ಲಿ ಮಾತು ಶುದ್ಧತೆ:
ಮಕ್ಕಳ ಉಚ್ಛಾರಣೆಯಲ್ಲಿ ತೊದಲು ಕಂಡುಬಂದರೆ ಪ್ರತಿದಿನ ಬಜೆ ಬೇರನ್ನು ತೇಯ್ದು ಕೊಡುವುದರಿಂದ ಮಾತಿನಲ್ಲಿ ಶುದ್ಧತೆ ಕಂಡುಬರುತ್ತದೆ. ಕೇವಲ ಮಕ್ಕಳಲ್ಲದೆ ವಯಸ್ಕರೂ ಸಹ ಈ ಬೇರನ್ನು ಸೇವಿಸುವ ಮೂಲಕ ಸ್ಪಷ್ಟವಾಗಿ ಉಚ್ಛರಿಸಬಹುದಾಗಿದೆ.
ಶ್ವಾಸಕೋಶ ಸಂಬಂಧಿ ಸಮಸ್ಯೆಗೆ ಪರಿಹಾರ:
ಉಸಿರಾಟ ಕ್ರಿಯೆ, ಕೆಮ್ಮು, ಕಫದಂತಹ ಸಮಸ್ಯೆಗಳಿಗೆ ಬಜೆ ಬೇರನ್ನು ಕುಟ್ಟಿ, ಪುಟಿ ಮಾಡಿ, ನೀರಿನಲ್ಲಿ ಕುದಿಸಿ, ಕಷಾಯ ಮಾಡಿ ಸೇವಿಸುವುದು ಉತ್ತಮ. ನೆಗಡಿ(ಶೀತ), ಜ್ವರದ ಸಮಸ್ಯೆಗಳಿಗೂ ಬಜೆ ಬೇರಿನ ಕಷಾಯ ಅತ್ಯಂತ ಪರಿಣಾಮಕಾರಿ…( ಆಯುರ್ವೇದ )
ನೆನಪಿನ ಶಕ್ತಿ ಹೆಚ್ಚಿಸುತ್ತದೆ
ಬಜೆ ಬೇರನ್ನು ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಹೆಚ್ಚಾಗಿ ಬಳಸುತ್ತಾರೆ. ಇದು ಮಗುವಿನ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರೂ ಕೂಡ ಬಜೆ ಬೇರನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಜೊತೆಗೆ ದೇಹದಲ್ಲಿ ಚುರುಕುತನ ಮೂಡುತ್ತದೆ.
ಜ್ವರ
ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಹಲ್ಲು ಹುಟ್ಟುವ ಸಮಯದಲ್ಲಿ ಜ್ವರ ಬರುತ್ತಿದ್ದರೆ ಬಜೆಯ ಬೇರನ್ನು ತೇಯ್ದು ಹಾಲಿನೊಂದಿಗೆ ಬೆರೆಸಿ ಅದನ್ನು ಸೇವನೆ ಮಾಡಲು ಕೊಡಬೇಕು. ತುಂಬಾ ಚಿಕ್ಕವರಾದರೆ ನಾಲಗೆಯ ಮೇಲಿಟ್ಟು ಅವರು ಅದನ್ನು ತಿನ್ನುವಂತೆ ನೋಡಿಕೊಳ್ಳಬೇಕು.
ಮಕ್ಕಳಿಗೆ ಮಾತ್ರವಲ್ಲ ದೊಡ್ಡವರೂ ಕೂಡ ಬಜೆ ಬೇರನ್ನು ಸೇವನೆ ಮಾಡುವುದರಿಂದ ನೆನಪಿನ ಶಕ್ತಿ ಜೊತೆಗೆ ದೇಹದಲ್ಲಿ ಚುರುಕುತನ ಮೂಡುತ್ತದೆ. ಜೊತೆಗೆ ಸ್ಮರಣಶಕ್ತಿ, ಬುದ್ಧಿ ಚುರುಕಾಗಲೂ ಕೂಡ ಇದನ್ನು ಬಳಕೆ ಮಾಡಲಾಗುತ್ತದೆ. ಈ ಬಜೆ ಬೇರನ್ನು ಲಿಂಬು ರಸದಲ್ಲಿ ತೇಯ್ದು ಸೇವನೆ ಮಾಡಲಾಗುತ್ತದೆ.
ಮಕ್ಕಳಿಗೆ ಮಾತು ಬರಲು ತಡವಾಗಿದ್ದಲ್ಲಿ ಅಥವಾ ಸ್ಪಷ್ಟ ಉಚ್ಚಾರಣೆ ಇಲ್ಲದಿದ್ದರೆ
ಮಕ್ಕಳಿಗೆ ಮಾತು ಬರಲು ತಡವಾಗಿದ್ದಲ್ಲಿ ಅಥವಾ ಸ್ಪಷ್ಟ ಉಚ್ಚಾರಣೆ ಇಲ್ಲದಿದ್ದರೆ ಪ್ರತಿದಿನ ಬಜೆಯ ಬೇರನ್ನು ತೇಯ್ದು ಜೇನಿನೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಅದನ್ನು ತಿನ್ನಿಸಬೇಕು.
ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಒಂದು ವರ್ಷದೊಳಗಿನ ಮಕ್ಕಳಿಗೆ ಪ್ರತಿದಿನ ಬಜೆ ಬೇರನ್ನು ಸುಟ್ಟು ಭಸ್ಮ ತಯಾರಿಸಿ ಎರಡು ಚಿಟಿಕೆಯಷ್ಟು ಜೇನುತುಪ್ಪ ಬೆರೆಸಿ ತಿನ್ನಿಸಬೇಕು. ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪದೇ ಪದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.
ಗ್ಯಾಸ್ಟ್ರಿಕ್, ಬೇಧಿಯಂತಹ ಆರೋಗ್ಯ ಸಮಸ್ಯೆಗಳಿಗೆ
ಈ ಗಿಡಮೂಲಿಕೆಯನ್ನು ಗ್ಯಾಸ್ಟ್ರಿಕ್, ಬೇಧಿಯಂತಹ ಆರೋಗ್ಯ ಸಮಸ್ಯೆಗಳಿಗೆ ಬಳಸಬಹುದಾಗಿದೆ. ಇದು ನಿಮ್ಮ ಜೀರ್ಣಶಕ್ತಿಯನ್ನು ಸುಧಾರಿಸಿ, ತಿಂದ ಆಹಾರ ಸುಲಭದಲ್ಲಿ ಜೀರ್ಣವಾಗುವಂತೆ ಮಾಡುತ್ತದೆ. ಹೀಗಾಗಿ ಬಜೆ ಬೇರನ್ನು ಚೂರ್ಣ, ಮಾತ್ರೆ ಅಥವಾ ಪುಡಿಯ ರೂಪದಲ್ಲಿ ಅಧಿಕವಾಗಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಬಜೆ ಬೇರನ್ನು ಆಯುರ್ವೇದದ ಪಂಚಕರ್ಮ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಜೊತೆಗೆ ಆತಂಕ, ಖಿನ್ನತೆಯಿಂದ ಬಳಲುತ್ತಿರುವವರಿಗೆ ಈ ಬೇರನ್ನು ಔಷಧಿಯಾಗಿ ಬಳಸಲಾಗುತ್ತದೆ. ಅಲ್ಲದೆ ಇದರ ಪರಿಮಳದಿಂದ ಖಿನ್ನತೆ ದೂರವಾಗುತ್ತದೆ.ಬಜೆ ಬೇರು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಇದನ್ನು ತೇಯ್ದು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಜೊತೆಗೆ ದೇಹದಲ್ಲಿನ ವಾತ ದೋಷವನ್ನು ಸಮತೋಲನಗೊಳಿಸುವ ಗುಣದಿಂದಾಗಿ ಸಂಧಿವಾತಕ್ಕೆ ಸಂಬಂಧಿಸಿದ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
